ಆಧಾರ್, ಪಾನ್ ಕಾರ್ಡ್, ಪಾಸ್ಪೋರ್ಟ್ ನಲ್ಲಿ ಹೆಸರು ಬದಲಾಯಿಸಲು ಪರದಾಡುತ್ತಿದ್ದೀರಾ.. ಒಮ್ಮೆ ಇಲ್ಲಿಗೆ ಭೇಟಿಕೊಡಿ

ಆಧಾರ್ ಕಾರ್ಡ್ ನಲ್ಲಿ ಹೆಸರನ್ನು ಬದಲಾವಣೆ / ತಿದ್ದುಪಡಿ:

ಆಧಾರ್ ಒಂದು 12 ಅಂಕೆಗಳ ವಿಶಿಷ್ಟ ಗುರುತಿನ ಸಂಖ್ಯೆ, ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುತ್ತದೆ. ಇದು ಭಾರತದ ಎಲ್ಲಾ ನಿವಾಸಿಗಳಿಗೆ ಗುರುತಿನ ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ಜೀವನದಲ್ಲಿಎರಡು ಬಾರಿ ಮಾತ್ರ ಬದಲಾಯಿಸಬಹುದು. ಹಾಗಾಗಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಹೆಸರನ್ನು ಬದಲಾಯಿಸುವುದು ಸೂಕ್ತ. ಹೆಸರನ್ನು ಬದಲಾಯಿಸಲು / ತಿದ್ದುಪಡಿ ಮಾಡಲು ಸೂಕ್ತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ, ಅವುಗಳೆಂದರೆ ಜನನ ಪ್ರಮಾಣ ಪತ್ರ, SSLC ಮಾರ್ಕ್ಸ್ ಕಾರ್ಡ್, ಪಾನ್ ಕಾರ್ಡ್, ವೋಟರ್ ID, ಪಾಸ್ಪೋರ್ಟ್ ಇತ್ಯಾದಿ.

ಪಾನ್ ಕಾರ್ಡ್ ನಲ್ಲಿ ಹೆಸರನ್ನು ಬದಲಾವಣೆ / ತಿದ್ದುಪಡಿ:

ಪ್ಯಾನ್ ಕಾರ್ಡ್ ಎಂದರೆ ಶಾಶ್ವತ ಖಾತೆ ಸಂಖ್ಯೆ (Permanent Account Number) ಹೊಂದಿರುವ ಒಂದು ಗುರುತಿನ ದಾಖಲೆ. ಇದು ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಡುತ್ತದೆ ಮತ್ತು ವ್ಯಕ್ತಿ ಅಥವಾ ಸಂಸ್ಥೆಯ ತೆರಿಗೆ ಸಂಬಂಧಿತ ಚಟುವಟಿಕೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಇದರಲ್ಲಿ ವ್ಯಕ್ತಿಯ ಹೆಸರು, ಹುಟ್ಟಿದ ದಿನಾಂಕ, ತಂದೆಯ ಹೆಸರು ಮತ್ತು ಛಾಯಾಚಿತ್ರ ಇರುತ್ತದೆ. ಪಾನ್ ಕಾರ್ಡ್ ನಲ್ಲಿ ಹೆಸರನ್ನು ಬದಲಾಯಿಸಲು / ತಿದ್ದುಪಡಿ ಮಾಡಲು ಸೂಕ್ತ ದಾಖಲೆಗಳನ್ನು ನೀಡಬೇಕಾಗುತ್ತದೆ, ಅವುಗಳೆಂದರೆ SSLC ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ID, ಪಾಸ್ಪೋರ್ಟ್, ANNEXURE A ಇತ್ಯಾದಿ.

ಪಾಸ್ಪೋರ್ಟ್ ನಲ್ಲಿ ಹೆಸರನ್ನು ಬದಲಾವಣೆ / ತಿದ್ದುಪಡಿ:

ಪಾಸ್‌ಪೋರ್ಟ್ ಒಂದು ದೇಶದ ಸರ್ಕಾರ ತನ್ನ ಪ್ರಜೆಗಳಿಗೆ ನೀಡುವ ಅಧಿಕೃತ ಪ್ರಯಾಣ ದಾಖಲೆಯಾಗಿದೆ. ಇದು ವ್ಯಕ್ತಿಯ ರಾಷ್ಟ್ರೀಯತೆ ಮತ್ತು ಗುರುತನ್ನು ಪರಿಶೀಲಿಸುತ್ತದೆ, ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ ಮತ್ತು ವಿದೇಶಿ ದೇಶಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಇತ್ತೀಚಿಗೆ ಕೆಲವು ರಾಷ್ಟ್ರಗಳು ಪಾಸ್ಪೋರ್ಟ್ ನಲ್ಲಿ 2 ಅಥವಾ 3 ಹೆಸರನ್ನು ಅಪೇಕ್ಷಿಸುತ್ತಿದೆ. ಹಾಗಾಗಿ ಒಂದು ಹೆಸರು ಇರುವವರು ಪಾಸ್ಪೋರ್ಟ್ ನಲ್ಲಿ ಹೆಸರು ಬದಲಾಯಿಸಲು ಪರದಾಡುತ್ತಿರುತ್ತಾರೆ. ಹೊಸ ಪಾಸ್ಪೋರ್ಟ್ / ರಿನಿವಲ್ ಮಾಡುವಾಗ ಹೆಸರನ್ನು ತಿದ್ದುಪಡಿ ಮಾಡಲು ಕನಿಷ್ಠ 3 ಸೂಕ್ತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ, ಅವುಗಳೆಂದರೆ ಆಧಾರ್, ಪಾನ್ ಕಾರ್ಡ್, ನ್ಯೂಸ್ ಪೇಪರ್ Advt , ವೋಟರ್ ID ಇತ್ಯಾದಿ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9482063077

Leave a Reply

Your email address will not be published. Required fields are marked *